ನಿಸ್ತುಲಾ ಹೆಬ್ಬಾರ್ ಭಾರತೀಯ ಪತ್ರಕರ್ತೆ ಹಾಗೂ ಲೇಖಕಿಯಾಗಿದ್ದಾರೆ, ಪ್ರಸ್ತುತ ದಿ ಹಿಂದೂ ನಲ್ಲಿ ರಾಜಕೀಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಈ ಹಿಂದೆ ದಿ ಟೈಮ್ಸ್ ಆಫ್ ಇಂಡಿಯಾ, ದಿ ಎಕನಾಮಿಕ್ ಟೈಮ್ಸ್, ಮತ್ತು ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ಗಾಗಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. == ಆರಂಭಿಕ ಜೀವನ == ಇವರು ಮೂಲತಃ ಮಂಗಳೂರಿನವರು, ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. ಅವರು ಜೀಸಸ್ ಮತ್ತು ಮೇರಿ ಕಾಲೇಜು ಹಾಗೂ ದೆಹಲಿ ವಿಶ್ವವಿದ್ಯಾಲಯ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. == ಪತ್ರಿಕೋದ್ಯಮ == ಹೆಬ್ಬಾರ್ ಅವರು ೨೦೦೦ ರಿಂದ ಪತ್ರಕರ್ತರಾಗಿದ್ದಾರೆ. == ಕೃತಿಗಳು == ಅವರು ೨೦೧೨ ರಲ್ಲಿ ಕಿಸ್ ಆಂಡ್ ಟೆಲ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅವರು "ಕ್ಯಾಬಲ್ಸ್ ಅಂಡ್ ಕಿಂಗ್ಸ್" (ಅದಿತಿ ಫಡ್ನಿಸ್ ಸಂಪಾದಿಸಿದ್ದಾರೆ) ಮತ್ತು "ದಿ ಲೈವ್ಸ್ ಆಫ್ ಮುಸ್ಲಿಮ್ಸ್ ಇನ್ ಇಂಡಿಯಾ" (ಅಬ್ದುಲ್ ಶಬಾನ್ ಸಂಪಾದಿಸಿದ್ದಾರೆ) ಎಂಬ ಎರಡು ಪುಸ್ತಕಗಳಿಗೆ ಕೊಡುಗೆ ನೀಡಿದ್ದಾರೆ. ಅವರ ಪ್ರಬಂಧವು ಭಾರತೀಯ ಜನತಾ ಪಕ್ಷದೊಂದಿಗೆ ಮತ್ತು ಮುಸ್ಲಿಮರೊಂದಿಗೆ ಭಾರತೀಯ ಜನತಾ ಪಕ್ಷದ ಒಡನಾಟದ ಬಗ್ಗೆ ವ್ಯವಹರಿಸುತ್ತದೆ. . == ಉಲ್ಲೇಖಗಳು ==